ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಇಬ್ಬರು ಗೆಳೆಯರ ನಡುವೆ ಸಂಭಾಷಣೆ
  • ಹರೀಶ್ - ನಮಸ್ಕಾರ ಪಾಂಡೆ ಜಿ.
    ನಮಸ್ಕಾರ್ ಪಾಂಡೆ ಜ್ಯೂ.
  • ಪಾಂಡೆ ಜಿ - ನಮಸ್ಕಾರ ಹರೀಶ್ ಅಣ್ಣ.
    ನಮಸ್ಕಾರ್ ಹೋ ಹರೀಶ್ ಭಾಯೀ.
  • ಹರೀಶ್, ಮತ್ತೆ, ಹೇಗಿದ್ದೀರಾ? ಏನು ಹೊಸ ಸಮಾಚಾರ?
    ಔರ್ ಕಸ್ ಛನ್ ಹಾಲ್‌ಚಾಲ್, ನಯೀ ತಾಜಿ ಕೆ ಛ್?
  • ಪಾಂಡೆ ಜಿ- ನಾನು ಆರಾಮವಾಗಿದ್ದೇನೆ ಗೆಳೆಯಾ.ಸದಾ ಕಾಲ ನಾನು ಎವರ್ ಗ್ರೀನ್ ಆಗಿರುತ್ತೇನೆ.ಪ್ರತಿಯೊಂದೂ ಹಾಗೇ ಇದೆ.
    ಠೀಕೈ ಛುಂ ಯಾರ್.ಸೌಣಾ ಸುಖಿಯತ್ ನೈ ಭದೋ ಹರಿ, ಸಬ್ ಏಕ್ಕೈ ಜಸ್ ಛ್.
  • ಹರೀಶ್ - ಈ ದಿನ ತುಂಬ ದಿನಗಳ ನಂತರ ನಾವು ಭೇಟಿಯಾಗುತ್ತಿದ್ದೇವೆ.
    ಆಜ್ ಭೌತ್ ದಿನೋಂ ಮೈ ಮುಲಾಕಾತ್ ಹುಂಣೈ.
  • ಪಾಂಡೆ ಜೀ - ಓಹ್, ಹೌದು.ಚೆನ್ನಾಗಿ ಹೇಳಿದಿರಿ ಗೆಳೆಯಾ.ಕೆಲಸದ ಕಾರಣ ನಮಗೆ ಪುರುಸೊತ್ತೇ ಸಿಗುತ್ತಿಲ್ಲ.
    ಯಸೈ ಭೈ ಯಾರ್, ಪುರ್ಸತೈ ನಿ ಮಿಲತಿ ನೌಕರಿ ಬಟಿ.
  • ಹರೀಶ್ - ನೀವು ಹೇಳುತ್ತಿರುವ ಮಾತು ಸರಿಯಾಗಿದೆ.
    ಬಾತ್ ತ್ ತುಮ್ ಸಹೀ ಕಂಣೌಛಾ.
  • ಪಾಂಡೆ ಜಿ - ನೀವು ಹೇಳಿ, ಯಾವ ಕಡೆಗೆ ಹೋಗುತ್ತಿದ್ದೀರಿ?
    ತು ಸುಂಣಾ, ಕಾಂಹುಂ ಹೈರೈ ದೌಡ್?
  • ಹರೀಶ್ - ನಿಮ್ಮನ್ನು ಕಾಣಲೆಂದೇ ಬಂದೆ.ನೀವು ತುಂಬ ದಿನಗಳಿಂದ ಕಾಣಿಸಲೇ ಇಲ್ಲ.
    ತುಮಾರೈ ಪಾಸ್ ಆಯೂಂ.ಕತು ದಿನ್ ಬಟಿ ದರ್ಶನೈ ನಿ ಹುಣೌಂ ಛಿ ತುಮಾರಾ.
  • ಪಾಂಡೆ ಜೀ - ನಿಮ್ಮನ್ನು ಭೇಟಿಯಾಗಲು ಬರಬೇಕೆಂದು ನಾನೂ ಯೋಚಿಸುತ್ತಿದ್ದೆ, ಆದರೆ ನೀವೇ ಬಂದಿರಿ.
    ಸೋಚಣ್ ತ್ ಮೈಲೈ ಮಾಗಿ ರೈ ಛ್ಯುಂ ಯಾರ್ ಕಿ ತ್ಯಾರ್ ಪಾಸ್ ಊಂನ್ ಕೈಬೇರ್, ತುಯೀ ಜೈ ಏರೋಛೈ.
  • ಹರೀಶ್ - ಭೇಟಿಯಾಗುವುದಷ್ಟೇ ಉದ್ದೇಶ.ನಾನು ಬಂದರೇನು ಅಥವಾ ನೀವು ಬಂದರೇನು.ಉದ್ದೇಶ ಭೇಟಿ ಮಾಡುವುದಷ್ಟೇ.ಆದು ಆಯಿತು.
    ಏಕ್ಕೈ ಬಾತ್ ಭೈ, ಮೈ ಏಯೂಂ ಭಲೈ ತುಮ್ ಊಂನಾ ಭಲೈ.ಭೇಟ್ ಹೂಂಣ್ ದಗೈ ಮತಲಬ್ ಭೈ, ಹೈಗೇ.
  • ಪಾಂಡೆ ಜೀ- ದಯವಿಟ್ಟು ಬನ್ನಿ, ಒಳಗೆ ಬನ್ನಿ, ಒಳಗೆ ಕುಳಿತುಕೊಳ್ಳಿ.ಹೇ ಚಾರು, ಸ್ವಲ್ಪ ನೀರು ತಗೊಂಡು ಬಾ.
    ಆ ಪೈ ಆ ಭಿತೆರ್ ಕೈ, ಭಿತೆರ್ ಬೈಠ್, ಅರೇ ಚಾರೂ ಜರಾ ಪಾಂಣಿ ಲ್ಯೂನ್ ಧನ್ ರೇ.
  • ಪಾಂಡೆ ಜೀ - ತೆಗೆದುಕೊಳ್ಳಿ ಗೆಳೆಯಾ, ಮೊದಲು ನೀರು ಕುಡಿಯಿರಿ.ಇದು ಬೇಸಿಗೆ ಕಾಲ, ನಿಮಗೆ ಬಾಯಾರಿಕೆ ಆಗಿರಬೇಕು.
    ವೇ ಯಾರ್ ಪಾಂಣಿ ತ್ ಪೆ ಪೈಲಿ, ಗರ್ಮೀನಾಂ ದಿನ್ ಛನ್, ಪ್ಯಾಸ್ ಲಾಗಿ ರೈ ಹುನೈಲಿ.
  • ಹರೀಶ್ - ಹೌದು ಮಗು, ದಯವಿಟ್ಟು ನನಗೆ ನೀರು ಕೊಡು.ಅದು ಫ್ರಿಜ್‌ನಲ್ಲಿಟ್ಟ ನೀರಲ್ಲ ಎಂದು ಭಾವಿಸುತ್ತೇನೆ.
    ಹೋಯಾ ಚ್ಯಾಲಾ ಪಾಂಣಿ ಪೇವಾ ಪೈಲಿ.ಫ್ರಿಜೈಕ್ ತ್ ನ್ಹಾ ಕೆ.
  • ಚಾರು - ಇಲ್ಲ, ಇಲ್ಲ ಅಂಕಕಲ್.ಈ ನೀರು ಹೂಜಿಯದ್ದು.ನಾವೂ ಹೂಜಿಯಿಂದಲೇ ನೀರು ಕುಡಿಯುತ್ತೇವೆ.
    ನೈ ನೈ ಕಕಾ.ಘಡೈಕ ಪಾಂಣಿ ಛ್.ಹಮ್ ಲೈ ಘಡೈಕೈ ಪಾಂಣಿ ಪಿನೂಂ
  • ಹರೀಶ್ - ಅದೇ ಮಗೂ.ಈ ಫ್ಯಾನ್ ಸ್ವಲ್ಪ ವೇಗಗೊಳಿಸಿ, ಗೆಳೆಯಾ.
    ಬಸ್ ಹೈರೆ ಚ್ಯಾಲಾ.ಜರಾ ತೌ ಪಂಖಾ ತೇಜ್ ಕರ್ ದಿಯೈ ಯಾರಾ.
  • ಪಾಂಡೆ ಜೀ - ಹೇ ಚಾರು, ಸ್ವಲ್ಪ ಚಹಾ ಮಾಡುವಂತೆ ನಿನ್ನ ತಾಯಿಗೆ ಹೇಳು.ಹಾಗೆ, ಸಹೋದರಾ, ನೀವು ಹೇಗಿದ್ದೀರಿ?
    ಅರೇ ಚಾರೂ ಜರಾ ಚಹಾ ಲೈ ಬಡಾ ಕೌ ಧನ್ ಭಿತೆರ್ ಅಪ್ಪಿನ್ ಇಜ್ ಧನ್.ಔರ್ ಸುಣಾಂ ಹೋ.
  • ಹರೀಶ್ - ನಿಜ ಹೇಳಬೇಕೆಂದರೆ, ನಿಮ್ಮಿಂದ ಒಂದು ಸಲಹೆ ಪಡೆಯಬೇಕೆಂದು ಬಂದೆ ಪಾಂಡೆ ಜೀ, ಏಕೆಂದರೆ ನೀವು ನನಗಿಂತ ದೊಡ್ಡವರು.
    ಅಸಲ್ ಮೇ ತುಮನ್ ಧನ್ ಏಕ್ ರಾಯ್ ಲಿಣಿ ಛಿ ಮಕಂ ಪಾಂಡೇ ಜ್ಯು, ಕಿಲೇ ಕಿ ತುಮ್ ಠುಲ್ ಭಯಾ.
  • ಪಾಂಡೆ ಜೀ- ಓಹ್, ಇಲ್ಲ.ಅದು ಪರವಾಗಿಲ್ಲ.ವಿಷಯ ನನಗೆ ಅರ್ಥವಾದರೆ ನಾನು ಖಂಡಿತವಾಗಿಯೂ ನಿಮಗೆ ಸರಿಯಾಗಿ ತಿಳಿಸಿಕೊಡುತ್ತೇನೆ.
    ಅರೇ ಠುಲ್ ಹುಲ್ ಕೆ ನೈ, ಹಾಂ ಮೇರಿ ಸಮಝ್ ಮೆ ಆಲಿ ಬಾತ್ ತ್ ಜರೂರ್ ಸಹೀ ಸಹೀ ಬತೂಂನ್.
  • ಹರೀಶ್- ಮನ್ಶಿಯ ಗಿರೀಶ್ ಜೀ ಅವರು ನಿಮಗೆ ಗೊತ್ತೇ, ನಾನು ಅವರ ಮಗಳ ಬಗ್ಗೆ ಕೇಳಲು ಬಯಸಿದ್ದೇನೆ.
    ತುಮ್ ಮಾಂಸಿಕ್ ಗಿರೀಶ್ ಜ್ಯೂ ಕಂ ತ್ ಜಾಂಣನೈ ಛಾ.ಉನರೀ ಚೆಕಿಲ್ ಬಾರ್ ಮೈ ಪುಛಣ್ ಛಿ.
  • ಪಾಂಡೆ ಜೀ - ಯಾವ ಗಿರೀಶ್/ ರೆಬಾಧರ್ ಅವರ ಮಗ.ಹೌದು, ಅವರ ಕುಟುಂಬ ನನಗೆ ಚೆನ್ನಾಗಿ ಗೊತ್ತು.
    ಕೋ ಗಿರೀಶ್, ರೇಬಾಧರ್ ಚ್ಯೂಕ್ ಚ್ಯೋಲ್s ಹೋಯ್ ಉನಾರ್ ಪರಿವಾರ್ ಕಂ ಭಲೀಕೈ ಜಾಂಣುಂ.
  • ಪಾಂಡೆ ಜೀ- ಅಯ್ಯೋ ಗೆಳೆಯಾ, ಅವರ ಮಗಳು ಬಸಂತಿ ಲಕ್ಷಕ್ಕೊಬ್ಬಳು.ಅವರು ಚಿನ್ನದಂತಹ ಹುಡುಗಿ.
    ಅರೇ ಯಾರ್ ಅನೈರಿ ಚೇಲಿ ಬಸಂತಿ ತ್ ಲಾಖನ್ ಮೈ ಏಕ್ ಛ್, ಸುನ್ ಸಮಝೋ ಸುನ್ ಉಕಂ.
  • ಹರೀಶ್ - ನಾನೂ ಅದನ್ನೇ ಕೇಳುವವನಿದ್ದೆ.ನನ್ನ ದೊಡ್ಡ ಮಗ ಚಂದನ್ ಜೊತೆ ಮದುವೆಗೆ.ಇದಕ್ಕೆ ಅವಳು ಸೂಕ್ತಳೇ?
    ವೀಕೈ ಲಿಜಿ ಪುಛಣ್ ಛಿ ಮಕಂ.ಅಪಣ್ ಟುಲ್ ಚ್ಯೂಲ್ ಚಂದನಾಂಕ್ ಲಿಜಿ.ಕ್ಸಿ ರೌಲಿ ಉ?
  • ಪಾಂಡೆ ಜೀ - ಅವಳು ತುಂಬ ಒಳ್ಳೆಯವಳು ಹಾಗೂ ನೀವು ಅವಳನ್ನು ಕಣ್ಣು ಮುಚ್ಚಿ ಸಂತೋಷದಿಂದ ನಿಮ್ಮ ಕುಟುಂಬಕ್ಕೆ ಒಪ್ಪಿಕೊಳ್ಳಬಹುದು.ನೀವು ನನ್ನ ಅಭಿಪ್ರಾಯವನ್ನೂ ನೆನಪಿಟ್ಟುಕೊಳ್ಳುತ್ತೀರಿ.
    ಅರೇ ಆಂಖ್ ಬಂದ್ ಕರ್ ಬೇರ್ ಲ್ಯೂಂವೌ ಅಕಂ ಅಪಂಣ್ ಘರ್.ತುಮ್ ಲೈ ಕೆ ಯಾದ್ ಕರಲಾ ಮೇರಿ ರಾಯ್.
  • ಹರೀಶ್ - ಈ ಅಭಿಪ್ರಾಯವನ್ನೇ ತಿಳಿಯಲು ಬಯಸಿದ್ದೆ.ಏಕೆಂದರೆ, ಅವರ ಬಗ್ಗೆ ನಿಮಗೆ ಎಲ್ಲವೂ ಗೊತ್ತು.
    ಬಸ್ ಇತುಕೈ ರಾಯ್ ಜಾಂಣಣಿ ಥಿ ತುಮರಿ ಫಿಲೈಕಿ ತುಮನಕ್ ಉನಾರ್ ಬಾರ್ ಮೈ ಸಬ್ ಮಾಲುಮ್ ಛ್.
  • ಪಾಂಡೆ ಜೀ - ಅವರ ಜೊತೆ ಯಾವಾಗ ಮಾತುಕತೆ ನಡೆಸುತ್ತೀರಿ? ಬೇಗನೆ ಮಾಡಿ.ಅದು ಕೈತಪ್ಪಿದರೆ, ನಷ್ಟ ನಿಮಗೇ.
    ಕಬ್ ಬಾತ್ ಕರಣೌ ಥಾ ಉನನಧನ್? ಜಲ್ದಿ ಕರೌ ಕೆ ಹಾತ್ ಬೈ ಮುಚಿ ಗಯೀ ತ್‌ ಚಾಯ್ಯೈ ರೌಲಾ.
  • ಹರೀಶ್ - ಅರೇ, ನಾವು ಏನು ಮಾತಾಡಬೇಕು? ನೀವು ನಮ್ಮ ಜೊತೆ ಬನ್ನಿ ಹಾಗೂ ನೀವೇ ಅದನ್ನು ನಿಶ್ಚಯ ಮಾಡಿ.
    ಅರೇ ಬಾತ್ ಹಮ್ ಕೆ ಕರೂಂನ? ತುಮ್ ದಗಡ್ ಹಿಟ್‌ಲಾ ಔರ್ ತುಮೈಂ ಬಾತ್ ಪಕ್ಕೀ ಕರಲಾ ಬಸ್.
  • ಪಾಂಡೆ ಜೀ - ನೀವು ಯಾವಾಗ ಹೋಗಲು ಬಯಸುತ್ತೀರೆಂದು ದಯವಿಟ್ಟು ನನಗೆ ಹೇಳಿ.ಅವರ ಮನೆಗೆ ಭೇಟಿ ನೀಡಲು ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ.
    ತೊ ಬತಾ ಕಬ್ ಹಿಟಣ್ ಛ್.ತಯ್ಯಾರಿ ಲೈ ಕ ಕರಣ್ ಪಡೈಲಿ ಉನಾರ್ ಯಾಂ ಜಾಂಣೈಕಿ.
  • ಹರೀಶ್- ಹಾಗಾದರೆ ನಾಳೆಯೇ ಹೋಗೋಣ.ನಮ್ಮ ಬಳಿ ಕಾರ್ ಇದೆ.ಚಂದನ್ ನನ್ನೂ ಜೊತೆಗೆ ಕರೆದೊಯ್ಯೋಣ.ಅವನೂ ನೋಡಲಿ.
    ಪೈ ಭೋವೈ ಹಿಟನೂಂ.ಗಾಡಿ ಛುಯೀ ಅಪಂಣ್ ಪಾಸ್ ಚಂದನ್ ಕಂ ಲೈ ಲಿಜ್ಯೂನ್, ದೇಖ್ ಲ್ಯೋಲ್ ಉಲೈ.
  • ಪಾಂಡೆ ಜೀ - ಸರಿ, ನಾಳೆಯೇ ಹೋಗೋಣ.ನಾನು ಸಿದ್ಧನಾಗಿರುತ್ತೇನೆ.ನಾವು ಬೆಳಗ್ಗೆಯೇ ಹೊರಡೋಣ.
    ಠೀಕ್ ಛ್ ಭೊವೈ ಹಿಟನೂಂ, ಮೈ ತಯ್ಯಾರ್ ರೂಂನ್, ರತ್ತೈಯಿ ನಿಕಲ್ ಜೂಂನ್ ಠಂಡ್ ಠಂಡ್ ಮೈ ಕಸ್.
  • ಹರೀಶ್ - ಸರಿ, ಖಂಡಿತ.ನಾನು ನಾಳೆ ಬೆಳಗ್ಗೆ ಕಾರಿನಲ್ಲಿ ಇಲ್ಲೇ ಬರುತ್ತೇನೆ.ಈಗ ನಾನು ಹೊರಡುತ್ತೇನೆ.
    ಠೀಕ್ ಛ್, ಪಕ್ಕ ರೈ.ಮೈ ಭೋ ರತ್ತೈಡ್ ಏ ಜೂಂನ್ ಗಾಡಿ ಲಿಬೇರ್ ಯೇ.ಅಬ್ ಹಿಟನೂಂ ಏಲ.